ಜಾತ್ರೆ ಭದ್ರತೆ: ನಗರದಲ್ಲಿ 14 ಚೆಕ್ ಪೋಸ್ಟ್ ನಿರ್ಮಾಣ: ಎಸ್‌ಪಿ ಉಮಾಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಯಿಂದ ಸುಮಾರು 12ರಿಂದ 14 ಲಕ್ಷ ಮಂದಿ ಬರುವ ನಿರೀಕ್ಷೆ ಇದ್ದು, ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ನಗರದೆಲ್ಲೆಡೆ 14 ಚೆಕ್ ಪೋಸ್ಟ್ ಗಳ ಹಾಕಲಾಗಿದ್ದು, ನಗರದಲ್ಲಿ ಅವಶ್ಯಕತೆ ಇರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಸಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಜಾತ್ರೆ ನಡೆಯಲಿದೆ. ದೇವಸ್ಥಾನ ಸುತ್ತಮುತ್ತ ಪ್ರಾಣಿ ಬಲಿ ನಿಷೇಧಿಸಲಾಗಿದ್ದು, ಯಾವುದೇ ಅಹಿತರ ಘಟನೆ ನಡೆದರೆ ಕ್ರಮ ಕೈಗೊಳ್ಳಲು ಪೊಲೀಸರ ಬಂದೋಬಸ್ತ್ ಒದಗಿಸಲಾಗಿದೆ.