ಶಕ್ತಿ ದೇವತೆ ದುಗ್ಗಮ್ಮ ಜಾತ್ರೆಗೆ ನಗರ ಸಜ್ಜುಜಾತ್ರೆ ಪ್ರಯುಕ್ತ ಭಾನುವಾರ ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ, ರಾತ್ರಿ ಭಕ್ತರ ಸಮ್ಮುಖದಲ್ಲಿ ಸಾರು ಹಾಕುವ ಕಾರ್ಯ ನೆರವೇರಿತು. ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಸಾವಿರಾರು ಭಕ್ತರು ಬಂದು ಅಮ್ಮನವರ ದರ್ಶನ ಪಡೆದರು. ತಿಂಗಳ ಹಿಂದೆಯೇ ಜಾತ್ರೆ ಹಂದರಗಂಬ ಪೂಜೆ ನೆರವೇರಿದ್ದು, ಪ್ರತಿವರ್ಷ ವಿಭಿನ್ನ ರೀತಿ ಮಂಟಪ ನಿರ್ಮಾಣವಾಗುತ್ತಿದ್ದು, ಈ ಬಾರಿ ಅರಮನೆಯಂತೆ ಮಂಟಪ ನಿರ್ಮಿಸಲಾಗಿದೆ.