ಲೀಗ್ ಕಮ್ ನಾಕೌಟ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ: ಶ್ರೀರಂಗ ಕಪ್ ನಂಜನಗೂಡು ತಂಡಕ್ಕೆಶ್ರೀರಂಗ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಟೂರ್ನಿಯಲ್ಲಿ ನಂಜನಗೂಡು ತಂಡ ಪ್ರಥಮ, ಕಾಲ ಭೈರವೇಶ್ವರ ಮಂಡ್ಯ ತಂಡ ದ್ವಿತೀಯ, ಸ್ಟಾರ್ ಮದ್ದೂರು ತಂಡ ತೃತೀಯ ಬಹುಮಾನ ಪಡೆದುಕೊಂಡವು. ನಂಜನಗೂಡು ತಂಡದ ನವೀನ್ ಅಲಿಯಾಸ್ ನಾಗ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.