ಗ್ರಾಮಸ್ಥರಿಂದ ಶ್ರಮದಾನ: ಗಾಂಧಿ ಗ್ರಾಮದ ರಸ್ತೆ ದುರಸ್ತಿನರಸಿಂಹರಾಜಪುರ, ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಮುಖ್ಯರಸ್ತೆಯಿಂದ ಗಾಂಧಿ ಗ್ರಾಮದ 3 ಕಿ.ಮೀ. ಸಂಪರ್ಕ ರಸ್ತೆ ಬಾರೀ ಮಳೆ ಯಿಂದ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಆ ಭಾಗದ ಗ್ರಾಮಸ್ಥರು ಸೇರಿ ಶುಕ್ರವಾರ ಶ್ರಮದಾನದ ಮೂಲಕ ಗುಂಡಿಗಳಿಗೆ ಮರಳು ಮಿಶ್ರಿತ ಕಲ್ಲು, ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದರು.