ಚನ್ನರಾಯಪಟ್ಟಣದಲ್ಲಿ ಯುಟಿ ಕೇಬಲ್ ಅಳವಡಿಕೆಅಡಚಣೆ, ಅವಘಡ ರಹಿತ ವಿದ್ಯುತ್ ಪೂರೈಕೆಯೊಂದಿಗೆ ಗುಣಮಟ್ಟ ವಿದ್ಯುತ್ ಸರಬರಾಜಿಗಾಗಿ ಪುರಸಭಾ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್‌ಗಳಲ್ಲಿ ೧೦ ಕೋಟಿ ರು. ವೆಚ್ಚದಲ್ಲಿ ಯುಟಿ ಕೇಬಲ್ ಮತ್ತು ಎಚ್ ಟಿ ಕವರ್ ಕಂಡಕ್ಟರ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ಗಾಳಿ, ಮಳೆಯಲ್ಲೂ ನಿರಂತರ ವಿದ್ಯುತ್ ಪೂರೈಕೆ ಹಾಗೂ ನಿರ್ವಹಣೆಯೂ ಸುಲಭವಾಗಲಿದೆ. ಕಾಮಗಾರಿಯೂ ೪ ತಿಂಗಳಲ್ಲಿ ಮುಗಿಯಲಿದ್ದು, ಕಾಮಗಾರಿ ವೇಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರ ಸಹಕಾರ ಅಗತ್ಯವೆಂದರು.