ಹಂಪಿಯೇ ಮೈಸೂರು ದಸರೆಗೆ ಪ್ರೇರಣೆ!ನಾಡಹಬ್ಬ ಮೈಸೂರಿನ ದಸರಾ ಹಬ್ಬಕ್ಕೆ ಪ್ರೇರಣೆ ಹಂಪಿ ನೆಲ. ನವರಾತ್ರಿ ಉತ್ಸವವನ್ನು ಹಂಪಿಯಲ್ಲಿ ವಿಜಯನಗರದ ಆಳರಸರ ಕಾಲದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಅದರ ಕುರುಹು ಆಗಿ ಈಗಲೂ ಹಂಪಿಯಲ್ಲಿ ಮಹಾನವಮಿ ದಿಬ್ಬ ಇದೆ. ವಿಜಯನಗರದ ಆಳರಸರ ಕಾಲದಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು ಎಂಬುದನ್ನು ಈ ಮಹಾನವಮಿ ದಿಬ್ಬ ಸಾಕ್ಷೀಕರಿಸುತ್ತದೆ.