ಗುರುವಿನ ಸೇವೆಯಿಂದ ಗುರು ಕೃಪಾ: ರಾಮಕೃಷ್ಣ ಮಹಾರಾಜರುಐಗಳಿ: ಗುರುವಿನ ಸೇವಾ ಮಾಡುವುದರಿಂದ ಗುರು ಕೃಪಾ ಆಗಲು ಸಾಧ್ಯ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ನಿಮ್ಮ ಸುಂದರ ಬದುಕನ್ನು ರೂಪಿಸಿಕೊಳ್ಳಿರಿ ಎಂದು ಯಲ್ಲಟ್ಟಿಯ ರಾಮಕೃಷ್ಣ ಮಹಾರಾಜರು ನುಡಿದರು. ಸ್ಥಳೀಯ ಸದ್ಗುರು ನರಸಿಂಹೇಶ್ವರ ಮಹಾರಾಜರ 45ನೇ ನಾಮಸಪ್ತಾಹ ಹಾಗೂ ಮಾಜಿ ಸೈನಿಕ, ನಿವೃತ್ತ ಶಿಕ್ಷಕ, ರೈತರ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ನರಸಿಂಹೇಶ್ವರ ಮಹಾರಾಜರು ಒಬ್ಬ ವ್ಯಕ್ತಿಯಲ್ಲ ಅದು ಒಂದು ಶಕ್ತಿ. ಅವರು ಮಾತಾಡಿದಂತೆ ಅದು ಆಗುತ್ತಿತ್ತು. ಅವರ ಮೇಲೆ ನಂಬಿಕೆಯಿಟ್ಟು ಅವರನ್ನು ಆರಾಧಿಸಿದರೇ ನೀವು ಇಟ್ಟ ಗುರಿ ತಲುಪಲು ಸಾಧ್ಯ.