ಸಂಭ್ರಮದ ರಾಘವೇಂದ್ರ ಸ್ವಾಮಿ ಪಟ್ಟಾಭಿಷೇಕ ಮಹೋತ್ಸವಲೋಕಾಪುರ: ಪಟ್ಟಣದ ವಿಪ್ರ ಸಮಾಜದ ವತಿಯಿಂದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ೪೦೩ ಪಟ್ಟಾಭಿಷೇಕ ಮಹೋತ್ಸವ ಸಂಭ್ರಮದಿಂದ ಜರುಗಿತು. ಬೆಳಗ್ಗೆ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ರ, ಪಲ್ಲಕ್ಕಿ ಸೇವೆ, ಅಲಂಕಾರ, ತೀರ್ಥ ಪ್ರಸಾದ, ಪ್ರವಚನ, ರಥೋತ್ಸವ, ಮಹಾಮಂಗಳಾರತಿ ಜರುಗಿತು. ಪಟ್ಟಾಭೀಷೇಕ ಕಾರ್ಯಕ್ರಮದ ಎಲ್ಲ ಸಹಕಾರವನ್ನು ದಿ. ಕೃಷ್ಣಾಜಿ ದೇಶಪಾಂಡೆ ಇವರ ಸುಪುತ್ರ ಗೋವಿಂದ ದೇಶಪಾಂಡೆ ಹಾಗೂ ಕುಟುಂಬಸ್ಥರು ವಹಿಸಿದ್ದರು.