ಸೆಪ್ಟೆಂಬರ್ ತಿಂಗಳ ಪಿಡಿಒ ಆಫ್ ದಿ ಮಂತ್ ಅನುಪಮಾ ಬೆನ್ನೂರಉತ್ತರ ಕನ್ನಡ ಜಿಪಂನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ ಸೆಪ್ಟೆಂಬರ್ ತಿಂಗಳ ಪ್ರಶಸ್ತಿಗೆ ಹಳಿಯಾಳ ತಾಲೂಕಿನ ಹವಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುಪಮಾ ಬೆನ್ನೂರ ಭಾಜನರಾಗಿದ್ದಾರೆ. ಅನುಪಮಾ ಅವರಿಗೆ ದಾಂಡೇಲಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.