ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಪೋಷಕರಿಗೆ ಫೋನ್ ಇನ್ ಕಾರ್ಯಕ್ರಮಗಣಿತದಲ್ಲಿ ಪ್ರಮೇಯ ಹಾಗೂ ನಕ್ಷೆಗಳ ಬಗ್ಗೆ ಒಂದು ಅಂಕ ಹಾಗೂ ಎರಡು ಅಂಕಗಳನ್ನು ಉತ್ತರಿಸುವ ಬಗ್ಗೆ, ವಿಜ್ಞಾನದಲ್ಲಿ ಅನ್ವಯಿಕ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದು ಎನ್ನುವುದರ ಬಗ್ಗೆ ಕನ್ನಡ ಇಂಗ್ಲಿಷ್ ಹಾಗು ಹಿಂದಿ ಭಾಷೆಗಳಲ್ಲಿ ಉತ್ತೀರ್ಣರಾಗುವುದು ಹೇಗೆ ಅಕ್ಷರವನ್ನು ಅಂದವಾಗಿ ಬರೆಯುತ್ತಾ ವೇಗವಾಗಿ ಬರೆಯುವುದು ಹೇಗೆ ಎಂಬುದರ ಬಗ್ಗೆ ಅನೇಕ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಫೋನಿನ ಕಾರ್ಯಕ್ರಮದ ಮೂಲಕ ನೇರವಾಗಿ ನುರಿತ ಸಂಪನ್ಮೂಲ ಶಿಕ್ಷಕರಿಗೆ ಕೇಳಿ ತಮ್ಮ ಸರಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರು. ಬೆಳಗ್ಗೆ ವೇಳೆ ಯಾವುದನ್ನು ಓದಬೇಕು? ಸಂಜೆ ವೇಳೆ ಯಾವುದನ್ನು ಓದಬೇಕು ಓದಿದ್ದನ್ನು ಹೇಗೆ ನೆನಪಿನಲ್ಲಿಟ್ಟಕೊಳ್ಳಬೇಕು. ಈ ಬಾರಿ ಪ್ರಶ್ನೆಪತ್ರಿಕೆ ಕಷ್ಟವಾಗಿರುತ್ತದೆಯೋ, ಸುಲಭವಾಗಿರುತ್ತೋ ಎಂದು ಮಕ್ಕಳು ಸಂಪನ್ಮೂಲ ಶಿಕ್ಷಕರಿಗೆ ಪ್ರಶ್ನೆಗಳ ಸುರಿಮಳೆಗೈದರು.