ಮಹಾದ್ವಾರ, ಪುತ್ಥಳಿ ತೆರವು: ಭಾನುವಳ್ಳಿಯಲ್ಲಿ ನಿಷೇಧಾಜ್ಞೆನಾಯಕ ಸಮಾಜದ ಮದಕರಿ ನಾಯಕ ಮಹಾದ್ವಾರ, ವೃತ್ತದ ನಾಮಫಲಕ ಹಾಗೂ ಕುರುಬ ಸಮಾಜದ ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿಚಾರವಾಗಿ ಕಳೆದ ಕೆಲವು ತಿಂಗಳಿನಿಂದ ಗ್ರಾಮದಲ್ಲಿ ಪ್ರತಿಭಟನೆ, ಧರಣಿಗಳು ನಡೆಯುತ್ತಿದ್ದವು. ಈ ವಿಚಾರದಿಂದಾಗಿ ಆಡಳಿತ ಯಂತ್ರಕ್ಕೂ ಇದು ತಲೆ ನೋವು ತಂದಿಟ್ಟಿತ್ತು. ಇಡೀ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ 28ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿ, ನಾಮಫಲಕ ತೆರವು ಮಾಡಲಾಯಿತು.