ಬೇಟೆಗಾರರಿಂದ ಅರಣ್ಯ ಇಲಾಖೆ ವಾಹನದ ಮೇಲೆ ಗುಂಡಿನ ದಾಳಿವಾಹನದಲ್ಲಿ ಬೇಟೆಯಾಡಲು ಬಂದ ನಾಲ್ವರು ಆರೋಪಿಗಳ ಪೈಕಿ ಚೌಡ್ಲು ಗ್ರಾಮದ ರಾಜಶೇಖರ್, ಕೆಂಚಮನಬಾಣೆಯ ಧನು ಎಂಬವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಈ ಪೈಕಿ ಆರೋಪಿ ಧನು ಘಟನೆ ಸ್ಥಳದ ಪಕ್ಕ ಕಾಫಿತೋಟವೊಂದರಲ್ಲಿ ಅವಿತುಕೊಂಡಿದ್ದ. ಈತನನ್ನು ಗುರುವಾರ ಮಧ್ಯಾಹ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.