ದ್ವಿತೀಯ ವರ್ಷದ ಕೊಡವ ವಾಲಗತ್ತಾಟ್ ನಮ್ಮೆ-2023 ಯಶಸ್ವಿ ಸಂಪನ್ನಖ್ಯಾತ ಸಾಹಿತಿ ದಿ.ಮುಲ್ಲೇಂಗಡ ಬೇಬಿ ಚೋಂದಮ್ಮ ಸ್ಮರಣಾರ್ಥ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಸಿದ ಎರಡನೇ ವರ್ಷದ ‘ಕೊಡವ ವಾಲಗತ್ತಾಟ್ ನಮ್ಮೆ-2023’ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪುಟ್ಟ ಮಕ್ಕಳು, ವೃದ್ಧರು ಸೇರಿದಂತೆ ಪುರುಷರು, ಮಹಿಳೆಯರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ವಾಲಗತ್ತಾಟ್ ನಮ್ಮೆಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಂಡರು.