ತಳಕಲ್ಲಿನಲ್ಲಿ ಅನ್ನದಾನೀಶ್ವರ ಶಾಖಾಮಠ ಸ್ಥಾಪನೆತಳಕಲ್ಲ ಗ್ರಾಮದಲ್ಲಿ ಮುಂಡರಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಶ್ರೀ ಶಾಖಾಮಠ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅನ್ನದಾನೀಶ್ವರ ಸಂಸ್ಥಾನಮಠ ನೂರಾರು ಎಕರೆಗಿಂತ ಹೆಚ್ಚು ಭೂ ದಾನವನ್ನು ಸಮಾಜದ ಅಭಿವೃದ್ಧಿಗೆ ನೀಡಿದೆ. ತಲಕಲ್ಲ ಗ್ರಾಮದ ಭಕ್ತರು ಹೃದಯವಂತರು, ಧಾನ ದರ್ಮಗಳ ಗುಣಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಬದುಕನ್ನು ಸಾಗಿಸುತ್ತಿದ್ದಾರೆ. ಇಂತಹ ಭಕ್ತರಿಗೆ ನಮ್ಮ ಮಠದ ನಾಲ್ಕು ಎಕರೆ ಭೂದಾನ ಮಾಡಿದ್ದು, ಅದರಲ್ಲಿ ೧೦ ಗುಂಟೆ ಜಾಗದಲ್ಲಿ ಕುಕನೂರ ಶ್ರೀಗಳ ನೇತೃತ್ವದಲ್ಲಿ ಶಾಖಾಮಠ ನಿರ್ಮಾಣ ಮಾಡಿರುವುದು ಅತ್ಯಂತ್ಯ ಸಂತೋಷ ತಂದಿದೆ, ಕುಕನೂರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.