26ರಂದು ಮೈಸೂರಿನಲ್ಲಿ ಗಿರಿಜನರ ಸಂಸ್ಕೃತಿ ಸಂರಕ್ಷಣಾ ಸಮಾವೇಶಅನ್ಯ ಧರ್ಮಗಳಿಗೆ ಮತಾಂತರಗೊಂಡ ಗಿರಿಜನರು ನಮ್ಮ ಸೌಲಭ್ಯಗಳನ್ನು ಸರ್ಕಾರದಿಂದ ಅನುಭವಿಸುತ್ತಿದ್ದು, ಅವರನ್ನು ಪರಿಶಿಷ್ಟ ಪಂಗಡದಿಂದ ಕೈಬಿಡಬೇಕು, ಅದಕ್ಕಾಗಿ ಸಮುದಾಯದ ಸಂಘಟನೆಯ ಉದ್ದೇಶದಿಂದ ನ. ೨೬ರಂದು ಮೈಸೂರಿನಲ್ಲಿ ೨೫ ಸಾವಿರ ಗಿರಿಜನರ ಸಂಸ್ಕೃತಿ ಸಂರಕ್ಷಣಾ ಸಮಾವೇಶ ಕೈಗೊಂಡಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ, ರಾಜ್ಯ ಗಿರಿಜನ ಸುರಕ್ಷಾ ವೇದಿಕೆ ನಿರ್ವಾಹಕ ವಿಸ್ವಸ್ಥ ಶಾಂತಾರಾಮ್ ಸಿದ್ದಿ ತಿಳಿಸಿದರು.