• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹಣೆಬರಹ ಚೆನ್ನಾಗಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು: ಜಿ.ಟಿ. ಪಾಟೀಲ
ಕಾಂಗ್ರೆಸ್ ಭಾಗ್ಯಗಳ ಕುರಿತು ಟೀಕೆ ಮಾಡುವ ಬಿಜೆಪಿಗರು ಪ್ರಧಾನಿ ಮೋದಿ ಉದ್ಯಮಿಪತಿಗಳ ಸಾಲ ಮನ್ನಾ ಮಾಡಿದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಭಾಗ್ಯಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಜೊತೆಗೆ ರಾಜ್ಯವನ್ನು ಅಭಿವೃದ್ದಿಪಥದಲ್ಲಿ ಕೊಂಡೊಯ್ಯುತ್ತದೆ ಎಂದು ಬೀಳಗಿ ಶಾಸಕ ಜಗದೀಶ್ ತಿಮ್ಮನಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಹಾರನಹಳ್ಳಿಯಲ್ಲಿ ಸ್ವಾಮೀಜಿ ಗದ್ದುಗೆ ನಾಶ ವಿರುದ್ಧ ಕ್ರಮಕ್ಕೆ ಆಗ್ರಹ
ಕೆ.ಆರ್. ವಿಶ್ವನಾಥ್, ಶಿವಕುಮಾರ್ ತಂಡದ 20 ಜನರು ಗ್ರಾಮದಲ್ಲಿ ಭಯೋತ್ಪಾದಕರಂತೆ ವರ್ತಿಸಿದ್ದಾರೆ. ಊರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ಕೂಡಲೇ ತನಿಖೆ ತೀವ್ರಗೊಳಿಸಿ ಸಂಬಂಧಪಟ್ಟವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು. ಅಲ್ಲದೇ, ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
೨ಎ ಮೀಸಲಾತಿ ಸಿಗುವವರೆಗೂ ಹೋರಾಟ
ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಸಿಗಲಿ ಎಂಬ ಸದುದ್ದೇಶದಿಂದ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಸಿಗುವ ವರೆಗೂ ಹೋರಾಟ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.ಲಿಂಗಾಯತ ಪಂಚಮಸಾಲಿ ಸಮಾಜವನ್ನು ೨ಎ ಮೀಸಲಾತಿ ಅನುಷ್ಠಾನಕ್ಕೆ ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸಿ ಶಿಫಾರಸು ಮಾಡುವಂತೆ ಹಕ್ಕೊತ್ತಾಯಿಸಿ ರಾಜ್ಯಾದಂತ ಆರಂಭವಾಗಿರುವ ೬ನೇ ಹಂತದ ಚಳವಳಿಗೆ ತಾಲೂಕಿನ ಅಬಲೂರು ಗ್ರಾಮದಲ್ಲಿನ ಸರ್ವಜ್ಞನ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಹಾವೇರಿ ಜಿಲ್ಲೆಯಾದ್ಯಂತ ಕೈಗೊಳ್ಳುವ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ನೇಜಾರು ಕಗ್ಗೊಲೆ ಆರೋಪಿಗೆ ಗಲ್ಲುಶಿಕ್ಷೆಯೇ ಆಗಬೇಕು: ಅಬ್ದುಲ್ ಅಜೀಂ
ನೇಜಾರು ಗ್ರಾಮದಲ್ಲಿ ನಡೆದ ತಾಯಿ ಮತ್ತು ಮೂವರ ಮಕ್ಕಳ ಕಗ್ಗೊಲೆ ಅಪರೂಪದಲ್ಲಿಯೇ ಅಪರೂಪದ ಪ್ರಕರಣವಾಗಿದ್ದು, ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ಹೊಸಪೇಟೆ ಬಂದ್ ಇಲ್ಲ
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ವಿಜಯನಗರ ಕಾಲುವೆಗಳ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ರೈತ ಮುಖಂಡರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಮೇ ೩೧ರ ವರೆಗೆ ನೀರು ಹರಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ಹೊಸಪೇಟೆ ಬಂದ್ ಕೈ ಬಿಡಲಾಗಿದೆ
ರೈತರಿಗೆ ತ್ವರಿತ ಸೇವೆ ಕಲ್ಪಿಸಲು‌ ಶ್ರಮಿಸಿದ ಸರ್ವೇ ಅಧಿಕಾರಿಗಳಿಗೆ ತಾಕೀತು
ಅಳತೆ, ವಾಟ್ನಿ, ಪೋಡಿ, ಆಕಾರ ಬಂದು ನಕಲು ಸೇರಿದಂತೆ ಯಾವುದೇ ಸೇವೆಯಾಗಲಿ ತ್ವರಿತಗತಿಯಲ್ಲಿಯೇ ಕಲ್ಪಿಸುವಲ್ಲಿ ಸರ್ವೇ ಇಲಾಖೆ ಪ್ರತಿಯೋರ್ವ ಅಧಿಕಾರಿ, ಸಿಬ್ಬಂದಿಗಳು ಶ್ರಮಿಸಬೇಕು. ಅನಗತ್ಯ ವಿಳಂಬ ಮಾಡಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ವೈಶಾಲಿ ಅವರು ರೋಣ ಸರ್ವೇ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಭಾವನಾತ್ಮಕ ಹೃದಯ ಅರಳಿದಲ್ಲಿ ಪ್ರತಿಭೆ ಹೊಮ್ಮಲು ಸಾಧ್ಯ
ಕರ್ನಾಟಕ ಸಂಘದ ಆಧ್ಯಕ್ಷ ಎಂ.ಎನ್. ಸುಂದರರಾಜ್ ಮಾತನಾಡಿ, ಅರ್ಜಿ ಮರ್ಜಿಗಳಿಲ್ಲದೆ ಕರ್ನಾಟಕ ಸಂಘಕ್ಕೆ ಎರಡು ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯಿಂದ ಬಂದ ಹಣವನ್ನು ಇಡಿ ಗಂಟಾಗಿ ಇಟ್ಟು ಕನ್ನಡಪರ ಕಾರ್ಯಕ್ರಮಗಳ ಆಯೋಜನೆಗೆ ಬಳಸಲಾಗುವುದು ಎಂದು ಹೇಳಿದರು.
ನಾಳೆ ಸಹಕಾರ, ನವೋದಯ ಸ್ವಸಹಾಯ ಸಂಘಗಳ ಜಿಲ್ಲಾ ಕ್ರೀಡಾಕೂಟ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರ ‘ಜಿಲ್ಲಾ ಮಟ್ಟದ ಕ್ರೀಡಾಕೂಟ’ ನ.30ರಂದು ಬೆಳಗ್ಗೆ 9 ಗಂಟೆಗೆ ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ.
ಕುಡಿವ ನೀರಿಗೆ ಸಮರ್ಪಕ ವಿದ್ಯುತ್ ಸೌಲಭ್ಯ ಒದಗಿಸಿ
ಪಟ್ಟಣದಲ್ಲಿ ೫೬ ಬೋರ್‌ವೆಲ್‌ಗಳು, ೨೧ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸಾರ್ವಜನಿಕರಿಗೆ ಮಾತ್ರ ನೀರಿನ ಸೌಲಭ್ಯದ ದಾಹ ನೀಗಿಸುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಪಟ್ಟಣಕ್ಕೆ ಎಷ್ಟು ದಿನಗಳಿಗೊಮ್ಮೆ ಕುಡಿಯುವ ನೀರು ಬಿಡುತ್ತಾರೆ ಎಂದು ಸಭೆಯಲ್ಲಿ ಶಾಸಕರು ಕೇಳಿದಾಗ, ಪಿಡಿಒ ರತ್ನಮ್ಮ ೬ ದಿನಗಳಿಗೊಮ್ಮೆ ಬಿಡುತ್ತಾರೆ ಸಾರ್ ಎಂದು ಉತ್ತರಿಸಿದರು. ಫಾರಂ- ೩ ಕೊಡಲು ಫಲಾನುಭವಿಗಳಿಂದ ಹಣ ಪಡೆಯುತ್ತೀರಿ ಎಂದು ಆರೋಪಗಳು ಕೇಳಿಬರುತ್ತಿವೆ. ಜತೆಗೆ ಸಾರ್ವಜನಿಕರು ಫಾರಂಗಾಗಿ ಅಲೆದಾಡುವಂತೆ ಮಾಡುತ್ತೀರಿ ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಬಹುನಿರೀಕ್ಷಿತ ಗಣೇಶಪಾಲ ಸೇತುವೆ ಕಾಮಗಾರಿ ಆರಂಭ
ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಮತ್ತು ವಿಧಾನಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೂಲಕ ₹ ೯.೯೫ ಕೋಟಿ ಅನುದಾನ ಬಿಡುಗಡೆ ಮಾಡಿತ್ತು.
  • < previous
  • 1
  • ...
  • 14008
  • 14009
  • 14010
  • 14011
  • 14012
  • 14013
  • 14014
  • 14015
  • 14016
  • ...
  • 14347
  • next >
Top Stories
ನವೆಂಬರ್‌ ಅಂತ್ಯಕ್ಕೆ ಕೈ ಕಿತ್ತಾಟಕ್ಕೆ ತಾರ್ಕಿಕ ಅಂತ್ಯ ಖಚಿತ : ಬಿವೈವಿ
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಕೇಸ್‌ ರದ್ದತಿಗೆ ಬುರುಡೆ ಗ್ಯಾಂಗ್‌ ಅರ್ಜಿ!
ನ.7ರಂದು ರಾಜಣ್ಣ ಮನೇಲಿ ಮತ್ತೆ ಸಿಎಂ ಸಿದ್ದರಾಮಯ್ಯ ಔತಣಕೂಟ
ಮೋದಿ ಸುಂದರ, ಕಠಿಣ ವ್ಯಕ್ತಿತ್ವದ ಯಶಸ್ವಿ ನಾಯಕ: ಟ್ರಂಪ್‌ ಬಣ್ಣನೆ
ದರ್ಶನ್‌ಗೆ ಹೊದಿಕೆ, ಬಟ್ಟೆಗೆ ಕೋರ್ಟ್‌ ಆದೇಶ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved