ಅಧಿಕಾರ ದಾಹದಿಂದ ರೈತರ ಮರೆತ ಕೈ ನಾಯಕರುಸಕಾಲದಲ್ಲಿ ಮಳೆ ಬಾರದೆ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಹಿತ ಚಿಂತನೆ ಮಾಡದೆ ರಾಜ್ಯದ ಕಾಂಗ್ರೆಸ್ ನಾಯಕರು ಅಧಿಕಾರ ಹಂಚಿಕೆಯ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಬಿಜೆಪಿ ಬರ ಅಧ್ಯಯನ ತಂಡದ ಮುಖ್ಯಸ್ಥ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹರಿಹಾಯ್ದರು. ಭರಮಸಾಗರದ ಸಮೀದ ಕೊಳಹಾಳು ಗ್ರಾಮದಲ್ಲಿ ಬರ ಪರಿಶೀಲನೆ ನಂತರ ಮಾತನಾಡಿದರು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆ ಉಂಟಾಗಿದೆ. ಕೆಲವೆಡೆ ರೈತರು ಈಗಾಗಲೇ ಜಾನುವಾರುಗಳನ್ನು ಮಾರಾಟ ಮಾಡುವ ಸ್ಥಿತಿ ತಲುಪಿದ್ದಾರೆ.