ಕನ್ನಡ ನಾಡು-ನುಡಿ, ಜಲ ಸಂರಕ್ಷಣೆಗೆ ಕಸಾಪ ಕಟಿಬದ್ಧ: ಬಿ.ಎಂ. ಮಟ್ಟಿಕಲ್ಲಿಅಂದು ಕನ್ನಡ ನಾಡು ಅನ್ಯಭಾಷಾ ಪ್ರಾಂತ್ಯಗಳ ಹಿಡಿತಕ್ಕೆ ಸಿಲುಕಿ ಪರಭಾಷೆಗಳ ಪ್ರಭಾವಕ್ಕೊಳಗಾಗಿ ಹರಿದು ಹಂಚಿ ಹೋಗಿದ್ದ ಸಂದರ್ಭದಲ್ಲಿ ಕನ್ನಡ ನಾಡು ನುಡಿಯ ಸಂರಕ್ಷಣೆ, ಕನ್ನಡ ಪುಸ್ತಕಗಳ ಪ್ರಕಟಿಸುವುದು, ಜನಮಾನಸದಲ್ಲಿ ಕನ್ನಡ ಹಿರಿಮೆ ಗರಿಮೆ ತಿಳಿಸಿ, ಕನ್ನಡ ಜಾಗೃತಿಯನ್ನುಂಟು ಮಾಡುವ ಉದ್ದೇಶದೊಂದಿಗೆ ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ ಎಂದು ರಬಕವಿ ಶ್ರೀಘಟ್ಟಗಿ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಚೇರಮನ್ ಬಿ.ಎಂ. ಮಟ್ಟಿಕಲ್ಲಿ ಹೇಳಿದರು.