ಸಾರ್ವಜನಿಕ ಸ್ಥಳಗಳಲ್ಲಿ ಸಮೂಹ ನಮಾಜ್ ನಿಷೇಧಿಸಲಿಸಾರ್ವಜನಿಕ ಸ್ಥಳಗಳಲ್ಲಿ “ಸಮೂಹ ನಮಾಜ್” ಹೆಸರಿನಲ್ಲಿ ರಸ್ತೆ, ಸರ್ಕಾರಿ ಆವರಣ ಹಾಗೂ ಸಾರ್ವಜನಿಕ ಸೌಲಭ್ಯಗಳ ದುರುಪಯೋಗ ನಡೆಯುತ್ತಿರುವುದನ್ನು ಖಂಡಿಸಿ, ತಕ್ಷಣವೇ ಸರ್ಕಾರ ನಿಷೇಧ ಸೂಚನೆ ಹೊರಡಿಸಬೇಕೆಂದು ಆಗ್ರಹಿಸಿ ಶ್ರೀರಾಮಸೇನೆಯಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು. ರಸ್ತೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಕಡ್ಡಾಯ. ಆದರೆ ಕೆಲವಡೆ ಪೊಲೀಸರು ಅನುಮತಿ ಪಡೆಯದೇ ಟ್ರಾಫಿಕ್ ತಿರುಗಿಸುವ ಮೂಲಕ ಸಾರ್ವಜನಿಕರ ಹಕ್ಕನ್ನು ದಾರಿ ತಪ್ಪಿಸುತ್ತಿದ್ದಾರೆ. ಸಿ.ಆರ್.ಪಿ.ಸಿ. ೧೪೪ ಮತ್ತು ಪಬ್ಲಿಕ್ ರೈಟ್ ಆಫ್ ವೇ ಆಕ್ಟ್ ಪ್ರಕಾರ ರಸ್ತೆ ಎಲ್ಲರಿಗೂ ಸೇರಿದ್ದು, ಅದನ್ನು ಧಾರ್ಮಿಕ ಕಾರ್ಯಕ್ಕಾಗಿ ತಡೆಹಿಡಿಯುವುದು ಕಾನೂನು ಉಲ್ಲಂಘನೆ ಎಂದು ಹೇಳಿದರು.