ಹಾಲುಮತ ಸಮಾಜದವರ ಕನಸು ನನಸಾಗುತ್ತಿದೆಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಬೆಂಗಳೂರಿನಲ್ಲಿ ಪ್ರತಿಷ್ಠಾಪನೆಗೊಂಡಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರಥವಾಗಿದ್ದರೆ, ಎರಡನೆಯದ್ದು ಮುದ್ದೇಬಿಹಾಳದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ. ರಾಜ್ಯದಲ್ಲಿಯೇ ಎರಡನೆ ಪ್ರತಿಮೆ ಇದಾಗಿದೆ. ಅಷ್ಟೊಂದು ಸುಂದರವಾಗಿ ಕೋಲ್ಹಾಪೂರದ ಶಿಲ್ಪಿಗಳು ಮೂರ್ತಿ ಕೆತ್ತನೆ ಮಾಡಿದ್ದಾರೆ. ಇದರಿಂದಾಗಿ ಈ ಭಾಗದ ಬಹುತೇಕ ಕುರುಬ ಸಮಾಜ ಸೇರಿದಂತೆ ಇತರೇ ಸಮಾಜ ಬಾಂಧವರ ಕನಸು ಕನನಸಾಗುವುತ್ತಿರುವುದು ಸಂತಸ ತಂದಿದೆ ಎಂದು ತಾಲೂಕು ಹಾಲುಮತದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.