ಹುಬ್ಬಳ್ಳಿ ಕಾ ಮಹಾರಾಜಾನಿಗೆ ಬಂಗಾಳಿ ಕಲಾವಿದರ ಸ್ಪರ್ಶಮೂರ್ತಿ ತಯಾರಿಕೆಗೆ ಇವರು ಗಂಗಾ ನದಿಯ ಮರಳನ್ನೇ ಬಳಸುತ್ತಾರೆ. ಮೊದಲು ಸ್ಥಳೀಯ ಮಣ್ಣನ್ನು ಬಳಸಿ ಮೂರ್ತಿಗೆ ರೂಪ ನೀಡಲಾಗುತ್ತದೆ. ಈ ಭಾಗದಿಂದಲೇ ಜೇಡಿಮಣ್ಣನ್ನು ಸಂಗ್ರಹಿಸಿದ್ದೇವೆ. ಮರದ ಕೋಲು, ಬಿದುರು, ಒಣಗಿದ ಹುಲ್ಲು ಬಳಸಿ ವಿಗ್ರಹಗಳ ಮೂಲ ಆಕಾರವನ್ನು ತಯಾರಿಸುತ್ತೇವೆ. ನಂತರ ಗಂಗಾನದಿಯಿಂದ ತಂದ ಮಣ್ಣಿನಿಂದ ಅಂತಿಮ ರೂಪ ನೀಡಲಾಗುತ್ತದೆ.