ಪತ್ನಿಗೆ ಹಲ್ಲೆ: ಪತಿಗೆ 10 ವರ್ಷ ಜೈಲುತನ್ನ ಮೇಲೆ ಹಾಕಿದ್ದ ಕೇಸ್ ಹಿಂಪಡೆಯುವಂತೆ ಒತ್ತಾಯಿಸಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದ ಅಪರಾಧಿ ಪತಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹24 ಸಾವಿರ ದಂಡ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾವಣಗೆರೆಯಲ್ಲಿ ಸೋಮವಾರ ತೀರ್ಪು ನೀಡಿದೆ.