ತಾಪಂ ಇ.ಒ.ಗಳ ಕಾನೂನುಬಾಹಿರ ನಿಯೋಜನೆ ಸಲ್ಲದುತಾಲೂಕು ಪಂಚಾಯಿತಿ ಇ.ಒ.ಗಳಾಗಿ ನಿಯಮಬಾಹಿರವಾಗಿ ನಿಯೋಜನೆಗೊಂಡ ಇಬ್ಬರೂ ಅಧಿಕಾರಿಗಳನ್ನು 7 ದಿನದೊಳಗೆ ಹುದ್ದೆಯಿಂದ ಬಿಡುಗಡೆಗೊಳಿಸಿ, ಮಾತೃಇಲಾಖೆಗೆ ವಾಪಸ್ ಕಳಿಸಬೇಕು. ಇಲ್ಲದಿದ್ದರೆ ಪಿಸಿಆರ್, ಪಿಐಎಲ್ ದಾಖಲಿಸುವುದಾಗಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಕುಂದೂರು ಬಿ.ಪ್ರಸನ್ನಕುಮಾರ ಎಚ್ಚರಿಸಿದ್ದಾರೆ.