ಸಿದ್ಧೇಶ್ವರ ಶ್ರೀಗಳ ತತ್ವ ಸಾರಲು 83 ಹಳ್ಳಿಗಳಿಗೆ ಪಾದಯಾತ್ರೆಸನ್ಯಾಸ, ತ್ಯಾಗ ಮತ್ತು ಜ್ಞಾನದ ಮೂರ್ತಿವೆತ್ತ ಸ್ವರೂಪವಾಗಿದ್ದ ಶತಮಾನದ ಸಂತ ಸಿದ್ದೇಶ್ವರ ಶ್ರೀಗಳ ಸಿದ್ಧಾಂತಗಳನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹತ್ವದ ಸಂಕಲ್ಪವನ್ನು ಹೊಂದಿದ್ದು, ಸಿದ್ದೇಶ್ವರ ಶ್ರೀಗಳ ದಶಕಗಳ ಕಾಲದ ವೈರಾಗ್ಯದ ಸಂಕೇತವಾಗಿರುವ ಪಾದುಕೆಗಳ ಸಹಿತ 83 ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಶ್ರೀಗಳು ಘೋಷಿಸಿದರು.