ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ವಿಶ್ವಾಸ ಗಳಿಸಲು ಸಾಧ್ಯವಿಜಯದಶಮಿ ಹಬ್ಬದ ಅಂಗವಾಗಿ ಹಳೆ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಯಿಂದ ಏರ್ಪಡಿಸಿದ್ದ ಕಸಬಾ ವಲಯದ ಜಮಾಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜಯದಶಮಿ ಹಬ್ಬವು ಸತ್ಯ, ಧರ್ಮ ಮತ್ತು ನ್ಯಾಯದ ಜಯವನ್ನು ಪ್ರತಿಬಿಂಬಿಸುತ್ತದೆ. ಈ ಹಬ್ಬದ ಹಿನ್ನೆಲೆಯಲ್ಲಿ, ನಾವು ಕೂಡಾ ಸಾರ್ವಜನಿಕರಿಗೆ ನ್ಯಾಯಯುತ, ಪಾರದರ್ಶಕ ಹಾಗೂ ಸಮರ್ಥ ಸೇವೆ ನೀಡಲು ಬದ್ಧರಾಗಿರಬೇಕು. ನಾವು ನಮ್ಮ ಕರ್ತವ್ಯಕ್ಕೆ ಸದಾ ನಿಷ್ಠೆಯಿಂದ ಕೆಲಸ ಮಾಡಿದರೆ, ಹಬ್ಬದ ಸಾರ್ಥಕತೆ ಹೆಚ್ಚಾಗುತ್ತದೆ. ಪ್ರತಿ ಹಬ್ಬವು ನಮ್ಮ ಸೇವೆ ಮನೋಭಾವವನ್ನು ಸುಧಾರಿಸಲು ಪ್ರೇರಣೆ ನೀಡಬೇಕು ಎಂದು ಹೇಳಿದರು.