ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬ ಆಚರೆಣೆಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 93ನೇ ಹುಟ್ಟುಹಬ್ಬ ಆಚರಣೆ ಅಂಗವಾಗಿ ನಗರದ ನೀರಬಾಗಿಲು ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದರ್ಗಾದಲ್ಲಿ ಪ್ರಾರ್ಥನೆಯನ್ನು ಶಾಸಕರು ಹಾಗೂ ಪಕ್ಷದ ಮುಖಂಡರು ನೆರವೇರಿಸಿದರು.ದೇವೇಗೌಡರು ಅಪ್ಪಟ ಗ್ರಾಮೀಣ ಪರಿಸರದಿಂದ ಬೆಳೆದು ಬಂದ ರೈತನ ಮಗ. ತುಂಬಿದ ಕೊಡದಂತೆ ಸರಳತೆಯ ಸಾಕಾರಮೂರ್ತಿ ಎನಿಸಿಕೊಂಡು, ಬದ್ಧತೆ, ಹಠ ಮತ್ತು ಛಲಗಾರಿಕೆಯಿಂದ ರಾಜಕೀಯ ಉತ್ತುಂಗಕ್ಕೇರಿದ ಮಹಾನಾಯಕರು ಎಂದು ಬಣ್ಣಿಸಿದರು.