ಮಲೆನಾಡಿನ ಆತಿಥ್ಯ ಸದಾ ಮೆಲುಕು ಹಾಕುವಂಥದ್ದುಶಿವಮೊಗ್ಗ: ಮಲೆನಾಡು ರಾಜ್ಯದಲ್ಲಿಯೇ ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಕ್ರೀಡಾಕೂಟಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿರುವ ನೌಕರ ಕ್ರೀಡಾಪಟುಗಳು ಶಿವಮೊಗ್ಗದಲ್ಲಿ ಕಳೆದ ಅಲ್ಪ ಸಮಯ, ಇಲ್ಲಿನ ಆತಿಥ್ಯವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.