ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಾಚರಣೆ: ಶಾಸಕ ಧೀರಜ್ ಮುನಿರಾಜ್ ನೇತೃತ್ವದಲ್ಲಿ ತಿರಂಗಾ ಯಾತ್ರೆದೇಶದ ತಂಟೆಗೆ ಬಂದ ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದು, ಇಡೀ ದೇಶ ಸೈನಿಕರ ಕಾರ್‍ಯಕ್ಷಮತೆಗೆ ಮೆಚ್ಚುಗೆ ಸೂಚಿಸಿ ಬೆಂಬಲಿಸುತ್ತಿದೆ. ಇಂದು ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರೇ ಕಾರಣ. ಉಗ್ರವಾದ, ಭಯೋತ್ಪಾದನೆಗಳು ಜಗತ್ತಿಗೆ ಮಾರಕವಾಗಿದ್ದು, ಇವು ಅಳಿಯಬೇಕು. ದೇಶದಲ್ಲಿ ಶಾಂತಿ ನೆಲೆಸಬೇಕು.