ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಔಷಧಿ ಅಂಗಡಿಗಳ ತಪಾಸಣೆಹಾಸನದ ಜಂಟಿಕೃಷಿ ನಿರ್ದೇಶಕರಾದ ಪಿ.ರಮೇಶ್ ಕುಮಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ತೀರ್ಥಪ್ರಸಾದ್, ಕೃಷಿ ನಿರ್ದೇಶಕ ಡಿ.ಕೆ.ಯೋಗಾನಂದ್ ಮತ್ತು ಸಹಾಯಕ ಕೃಷಿ ನಿರ್ದೇಶಕ ಜಾಗೃತಿಕೋಶ ಮಧುಸೂದನ್ ಸೇರಿದಂತೆ ಇನ್ನು ಮುಂತಾದವರು ತಾಲೂಕಿನ ಹಳೇಬೀಡು, ಮಾದೀಹಳ್ಳಿ ಹೋಬಳಿ ಸೇರಿದಂತೆ ವಿವಿಧೆಡೆಯಲ್ಲಿನ ಕೃಷಿ ಪರಿಕರಣ( ಆಗ್ರೋ ಕೇಂದ್ರಗಳಿಗೆ) ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಅಂದಲೆ ಸಮೀಪದ ರಾಮಚಂದ್ರಪುರ ಗ್ರಾಮದ ಸಿದ್ದೇಗೌಡ ಬಿನ್ ದೇವೇಗೌಡವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಹೈಬ್ರಿಡ್ ಹೈಟೆಕ್ ಮುಸುಕಿಜೋಳ ಬಿತ್ತನೆಬೀಜ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಜಾಗೃತಿದಳ ಮತ್ತು ಜಾರಿದಳದಿಂದ ದಾಳಿ ನಡೆಸಿ ಮುಸುಕಿಜೋಳ ಬಿತ್ತನೆ ಬೀಜವನ್ನು ವಶಪಡಿಸಿಕೊಂಡರು.