ಗುರಿ, ಸಾಧನೆಗೆ ದಾರಿ ತೋರುವುದೇ ಸಾಹಿತ್ಯರಾಮನಗರ: ಸಾಹಿತ್ಯ ಮತ್ತು ಬದುಕು ಎರಡೂ ಒಂದರೊಳಗೊಂದು ಬೆರೆತು ಅನುಭವದ ಮೂಸೆಯಲ್ಲಿ ಪರಿಪಕ್ವಗೊಂಡು ಹೊರಹೊಮ್ಮುವ ಸಂಜೀವಿನಿ. ಸಾಹಿತ್ಯವಿರದ ಬದುಕನ್ನು ಊಹಿಸಬಹುದು. ಆದರೆ ಬದುಕಿರದ ಸಾಹಿತ್ಯ ಇರಲಾರದು. ಬುದ್ಧಿಗೆ ಪ್ರೇರಣೆ, ಮನಸ್ಸಿಗೆ ರಂಜನೆ, ಗುರಿ ಸಾಧನೆಗೆ ದಾರಿ ತೋರುವುದೇ ಸಾಹಿತ್ಯ ಎಂದು ಹಾಸ್ಯ ಸಾಹಿತಿ ವೈ.ವಿ. ಗುಂಡೂರಾವ್ ಹೇಳಿದರು.