ಇಂದು ದಕ್ಷಿಣಕಾಶಿ ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವದಕ್ಷಿಣಕಾಶಿ ಶಿವಗಂಗೆ ಪುಣ್ಯಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಮಂಗಳವಾರ ನಡೆಯಲಿದೆ. ಶಿವಗಂಗೆಯ ಬೆಟ್ಟದ 4547 ಅಡಿಯ ತುತ್ತತುದಿಯಲ್ಲಿ, ಮಂಗಳವಾರ ತೀರ್ಥಕಂಬದಲ್ಲಿ ಗಂಗೋತ್ಪತ್ತಿಯಾಗಿ ನಂತರ ದೈವಜಲವನ್ನು ತಂದು ಶ್ರೀ ಗಂಗಾಧರೇಶ್ವರ ಸನ್ನಿಯ ಗಿರಿಜಾ ಕಲ್ಯಾಣ ಮಂಟಪದಲ್ಲಿ ಶೈವಾಗಮಿಕ ಡಾ.ಎಸ್.ಎನ್.ಸೋಮಸುಂದರ್ ದೀಕ್ಷಿತ್ ತಂಡದಿಂದ ಧಾರಾ ಮಹೋತ್ಸವ ನಡೆಯಲಿದೆ.