ಕುವೆಂಪು ವಿಶ್ವಮಾನವ ಸಂದೇಶ ಕಾರ್ಯರೂಪಕ್ಕಿಳಿಸಿಚನ್ನಪಟ್ಟಣ: ನಾವು ಕುವೆಂಪು ಸಾರಿದ ವಿಶ್ವ ಮಾನವ ಸಂದೇಶವನ್ನು ಗಾಳಿಗೆ ತೂರಿದ್ದೇವೆ. ಮನುಷ್ಯ ಹುಟ್ಟುವಾಗ ಹಾಗೂ ಸಾಯುವಾಗ ವಿಶ್ವಮಾನವ. ಆದರೆ, ಜೀವಿತ ಕಾಲದಲ್ಲಿ ಮಾತ್ರ ವಿಶ್ವಮಾನವತೆ ಮರೆತು ಅಲ್ಪಮಾನವರಾಗುತ್ತಿದ್ದೇವೆ ಎಂದು ಸಂಸದ ಡಾ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.