ಹೊಸತನದ ಚಿಂತನೆಗಳಿಂದ ಅಗತ್ಯ ಕೌಶಲ್ಯಗಳ ಬೆಳೆಸಿಕೊಳ್ಳಿ: ಡಾ.ರಂಗಸ್ವಾಮಿಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದು, ಕಳೆದ ಐದು ವರ್ಷದಲ್ಲಿ 1.5 ದಶಲಕ್ಷ ಪ್ರಬಂಧಗಳು ಮಂಡನೆಯಾಗಿವೆ. ಅಂತಹ ನಾವೀನ್ಯ ಯೋಜನೆಗಳು ವಾಣಿಜ್ಯೀಕರಣಗೊಳ್ಳಬೇಕಿದೆ. ಹೊಸತನದ ಚಿಂತನೆಗಳ ಮೂಲಕ ಅಗತ್ಯ ಕೌಶಲ್ಯತೆಗಳ ಬೆಳೆಸಿಕೊಳ್ಳಿ, ದೇಶದ ಆರ್ಥಿಕ ವೃದ್ಧಿಗೆ ಕೊಡುಗೆಗಳನ್ನು ನೀಡಿ. ಈ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಾತ್ಮಕ ವಾತಾವರಣ ನಿರ್ಮಿಸುವತ್ತ ಉಪನ್ಯಾಸಕ ಸಮೂಹ ಹೆಚ್ಚು ಕೇಂದ್ರಿಕರಿಸಬೇಕಿದೆ.