ಉಳಿದ ಆಶ್ರಯ ಮನೆಗಳನ್ನು ಯಾವಾಗ ಕೊಡುತ್ತೀರಿ ?ಶಿವಮೊಗ್ಗ: ಗೋವಿಂದಾಪುರದಲ್ಲಿ ನಿರ್ಮಾಣವಾಗಿರುವ 652 ಆಶ್ರಯ ಮನೆಗಳನ್ನು ಸಚಿವರು ಹಂಚಿಕೆ ಮಾಡಿದ್ದಾರೆ. ಆದರೆ, ಇನ್ನುಳಿದ 1728 ಮನೆಗಳನ್ನು ಯಾವಾಗ ನಿರ್ಮಾಣ ಮಾಡುತ್ತೀರಿ ? , ಈಗಾಗಲೇ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ಯಾವಾಗ ಕೊಡುತ್ತೀರಿ ? , ಈಗಾಗಲೇ ಹಂಚಿರುವ ಮನೆಗಳಿಗೆ ಶಾಶ್ವತ ವಿದ್ಯುತ್ ಯಾವಾಗ ಕೊಡುತ್ತೀರಿ ? ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದರು.