26ರಿಂದ ತೇರಾ ಕೋಟಿ ಜಪ ಸಾಂಗತಾ ಯಜ್ಞ: ಸಂತೋಷ ಭಾರದ್ವಾಜ್27ರಂದು ಬೆಳಗ್ಗೆ 9ರಿಂದ ಗೋಪೂಜೆ ಸಹಿತ ರಾಮತಾರಕ ಹೋಮ ಆರಂಭವಾಗಲಿದೆ. 11 ಗಂಟೆಗೆ ಪೂರ್ಣಾಹುತಿ, 11:30ಕ್ಕೆ ದೀಪ ಪ್ರಜ್ವಲನೆ ಮತ್ತು ಸಭಾ ಕಾರ್ಯಕ್ರಮ, ಸ್ವಾಮೀಜಿ ಅವರ ಆಶೀರ್ವಚನ ನಡೆಯಲಿದ್ದು, 12.30ರಿಂದ ಅನ್ನಸಂತರ್ಪಣೆ ಜರುಗಲಿದೆ ಎಂದು ವಿವರಿಸಿದರು. ಸಂಜೆ 4 ರಿಂದ ಮಹಿಳೆಯರಿಂದ ಭಜನೆ, ಆಯ್ದ ಕಲಾವಿದರಿಂದ ಯಕ್ಷ ರಸಸಂಜೆ, ರಾತ್ರಿ 8.30ಕ್ಕೆ ಶೇಜಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. 28ರಂದು ಬೆಳಗ್ಗೆ 9.30ಕ್ಕೆ ಗೋಪೂಜೆ ಸಹಿತ ಹೋಮ, 10.30ಕ್ಕೆ ಸಾಧು ಸಂತರಿಂದ ಪೂರ್ಣಾಹುತಿ, 11 ಗಂಟೆಗೆ ಸಭಾ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ, ಬಳಿಕ ಸ್ವಾಮೀಜಿಗಳ ಆಶೀರ್ವಚನ ನಡೆಯಲಿದೆ ಎಂದರು.