ಮಿಚಿಗನ್ ವಿವಿಯಲ್ಲಿ ಡಾ. ಕುರಿಯನ್ ಸ್ಮಾರಕ ದತ್ತಿ ಉಪನ್ಯಾಸಡಾ. ವರ್ಗೀಸ್ ಕುರಿಯನ್ ದತ್ತಿನಿಧಿಯನ್ನು ಮಿಚಿಗನ್ ವಿ.ವಿ.ಯಲ್ಲಿ ಮಾನವ ಬಂಡವಾಳ, ಸಾಂಸ್ಥಿಕ ಉದ್ಯಮಶೀಲತೆ, ಸಾಮಾಜಿಕ ಸಬಲೀಕರಣ, ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ತಂತ್ರಜ್ಞಾನ, ಹೊಸ ಆವಿಷ್ಕಾರಗಳ ಕಡೆಗೆ ಡಾ. ವರ್ಗೀಸ್ ಕುರಿಯನ್ ಪರಂಪರೆಯನ್ನು ಮುಂದುವರಿಸಲು ನೆರವಾಗುವಂತೆ ಇಂಟರ್ನ್ಶಿಪ್ಗಳು, ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ತಜ್ಞರ ಸಭೆಗಳು ಸೇರಿದಂತೆ ಅಂತರ ರಾಷ್ಟ್ರೀಯವಾಗಿ ನೀಡಲಾಗುವ ಮಿಚಿಗನ್ ವಿವಿ ಕಾರ್ಯಕ್ರಮಗಳಲ್ಲಿ ತರಬೇತಿ ಕಾರ್ಯಕ್ರಮಗಳಲ್ಲಿ ಹಾಜರಾಗಲು ಮಿಚಿಗನ್ ವಿವಿಯ ವಿದ್ಯಾರ್ಥಿಗಳು, ವಿದ್ವಾಂಸರು ಭಾರತ ಮತ್ತು ದಕ್ಷಿಣ ಏಷ್ಯಾದ ನಿವಾಸಿಗಳನ್ನು ಬೆಂಬಲಿಸಲು ಬಳಸಲಾಗುತ್ತದೆ ಎಂದು ಶಿಮುಲ್ ನಿವೃತ್ತ ಉಪ ವ್ಯವಸ್ಥಾಪಕ ಡಿ.ವಿ. ಮಲ್ಲಿಕಾರ್ಜುನ ಹೇಳುತ್ತಾರೆ.