ಅಜ್ಞಾನಿಕ ಬೈಪಾಸ್ ನಿರ್ಮಾಣ ಕೈ ಬಿಡಬೇಕುಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್ ಈಶ್ವರಪ್ಪ ಮಾತನಾಡಿ, ರಾಣೇಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯು ಬೈಪಾಸ್ ರಸ್ತೆ ಮೂಲಕ ಸಾಲೂರು ರಸ್ತೆಯಿಂದ ಶಿರಾಳಕೊಪ್ಪ ರಸ್ತೆ ಮೂಲಕ ಮಾಸೂರು ರಸ್ತೆ ಸಂಪರ್ಕ ಕಲ್ಪಿಸುತ್ತಿದೆ. ಈ ಯೋಜನೆಗೆ ಅನಗತ್ಯವಾದ ಗಬ್ಬೂರು, ಚನ್ನಳ್ಳಿ, ಸದಾಶಿವಪುರ, ನೆಲವಾಗಿಲು, ಕಾನೂರು, ಹಳಿಯೂರು ಗ್ರಾಮಗಳ ಜಮೀನುಗಳು ಭೂಸ್ವಾಧಿನಕ್ಕೆ ಒಳಪಡುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ, ತಹಸೀಲ್ದಾರ್ ಸಂಸದರು ಮತ್ತು ಶಾಸಕರು ಒಟ್ಟಿಗೆ ಸೇರಿ ಸಭೆ ಕರೆಯಲು 4 ಬಾರಿ ಮನವಿ ಮಾಡಿದರೂ ಫಲ ನೀಡಿಲ್ಲ. ವಾಹನಗಳ ಒತ್ತಡ ಕಡಿಮೆ ಇದ್ದರೂ ಹೆದ್ದಾರಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಸಂಸದರು ಅವರ ಜಮೀನುಗಳಲ್ಲಿ ಕೈಗಾರಿಕೆ, ವಿದ್ಯಾ ಸಂಸ್ಥೆಗಳನ್ನು ಕಟ್ಟುತಿದ್ದಾರೆ. ಬಡರೈತರ ಜಮೀನು ಭೂಸ್ವಾಧೀನ ಮಾಡಬೇಡಿ ಎಂದು ಮನವಿ ಮಾಡಿದರೆ ಉತ್ತರ ಕೊಡುತ್ತಿಲ್ಲ.