ಜಿಲ್ಲೆಯಲ್ಲೂ ಶುರುವಾಯ್ತು ಟೋಲ್ ಪಾವತಿ ಸಂಚಾರ!ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಗೇಟ್ ವಿರುದ್ಧ ಜನರ ಆಕ್ರೋಶದ ನಡುವೆಯೂ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರ ಹೊಸ ಟೋಲ್ ನಿರ್ಮಾಣಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ 2 ಟೋಲ್ ಗೇಟ್ ಸ್ಥಾಪಿಸಲಾಗಿದ್ದು, ಇನ್ಮುಂದೆ ಟೋಲ್ ಪಾವತಿಸಿ ಜನರು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಶಿವಮೊಗ್ಗ – ಸವಳಂಗ ನಡುವೆ 1 ಟೋಲ್ ಗೇಟ್ ಸ್ಥಾಪಿಸಲಾಗಿದೆ. ಶಿಕಾರಿಪುರ– ಶಿರಾಳಕೊಪ್ಪ ನಡುವೆ ಇನ್ನೊಂದು ಟೋಲ್ ನಿರ್ಮಿಸಲಾಗಿದೆ. ಆದರೆ, ಈ ಭಾಗದ ರಸ್ತೆಯಲ್ಲಿ ಶಿಕಾರಿಪುರ, ಸೊರಬ ತಾಲೂಕಿನ ನೂರಾರು ಹಳ್ಳಿಯ ರೈತರು ಒಂದಿಲ್ಲೊಂದು ಕಾರಣಕ್ಕೆ ಶಿಕಾರಿಪುರ ಹಾಗೂ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಮುಂದೆ ಇವರೆಲ್ಲರು ಟೋಲ್ ಕಟ್ಟಿ ಮುಂದೆ ಸಾಗಬೇಕಿದೆ.