ಅಂಗವಿಕಲೆಗೆ ಅಲೆಸದೇ ಪತಿ ಮರಣ ಪತ್ರ ನೀಡಿಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಂಗವಿಕಲೆ ಕಮಲಮ್ಮ ಅವರ ಪತಿ ಮೃತ ತಿರುಕಪ್ಪನವರ ಶವ ಪರೀಕ್ಷೆ ಮಾಡಿ, ವರದಿಯನ್ನು ನೀಡಿ, ಮರಣ ಪ್ರಮಾಣ ಪತ್ರಕ್ಕೆ ಮಾತ್ರ ಮೊದಲು ದಾಖಲಾದ ಆಸ್ಪತ್ರೆ ವ್ಯಾಪ್ತಿಯ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಪಡೆದುಕೊಳ್ಳಿ ಎಂದು ಪತ್ರ ಬರೆದುಕೊಟ್ಟು ಆರು ವರ್ಷದಿಂದ ಮರಣ ಪತ್ರಕ್ಕಾಗಿ ಅಲೆದಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಜನಧನಿ ಜನಾ ಸೇವಾ ಸಂಸ್ಥೆಯ ಮಹಿಳಾ ಘಟಕದ ಉಪಾಧ್ಯಕ್ಷೆ ಕುಸುಮ ಆನವಟ್ಟಿಯಲ್ಲಿ ಒತ್ತಾಯಿಸಿದ್ದಾರೆ.