26ರಿಂದ ಬೆಂಗಳೂರಿನಲ್ಲಿ 72 ತಾಸು ಮಹಾಧರಣಿ: ಬಸವರಾಜಪ್ಪ ಮಾಹಿತಿರಾಜ್ಯ ಸಂಪೂರ್ಣ ಬರಗಾಲವೆಂದು ಘೋಷಿತ ಆಗಿದ್ದರಿಂದ ತತ್ಕ್ಷಣದಿಂದ ರೈತರಿಗೆ ಎಕರೆಗೆ 20 ಸಾವಿರ ಪರಿಹಾರ ಘೋಷಿಸಬೇಕು. ರಾಜ್ಯದ 214 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಿದೆ. ಆದರೆ, ರೈತರಿಗೆ ಬರಗಾಲ ಪರಿಹಾರಧನ ವಿತರಿಸುವ ಪ್ರಕ್ರಿಯೆ ಇದುವರೆಗೂ ಪ್ರಾರಂಭಿಸಿಲ್ಲ. ಇತ್ತೀಚೆಗೆ ರೈತರ ಐಪಿ ಸೆಟ್ಗಳಿಗೆ ಮೂಲಸೌಕರ್ಯವನ್ನು ರೈತರೇ ಮಾಡಿಕೊಳ್ಳಬೇಕೆಂದು ಸೂಚಿಸಿದೆ. ಇದರಿಂದ ರೈತರಿಗೆ ನಷ್ಟದ ಗಾಯದ ಮೇಲೆ ಬರೆ ಎಳೆದಂತಾಗಿದೆ