ಸುಶೀಲ್‌ಗೆ ಚೂರಿ ಇರಿತ ಪ್ರಕರಣ: ಮೂವರು ಆರೋಪಿಗಳ ಸೆರೆಶಿಕಾರಿಪುರ ಪಟ್ಟಣದ ದೊಡ್ಡಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದ ಚೂರಿ ಇರಿತ ಪ್ರಕರಣದಲ್ಲಿನ ನಾಲ್ಕು ಆರೋಪಿಗಳಲ್ಲಿ ಒಟ್ಟು ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಬಾಲಾಪರಾಧಿಯೂ ಸೇರ್ಪಡೆಗೊಂಡಿದ್ದಾನೆ. 3ನೇ ಆರೋಪಿ, ಬಾಲಾಪರಾಧಿ ಷಹನಾಜ್ ಎಂಬಾತನನ್ನೂ ಪ್ರಕರಣದಡಿ ಬಂಧಿಸಿ ಶಿವಮೊಗ್ಗದ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ. ಮಂಗಳವಾರ ರಾತ್ರಿ ಪಟ್ಟಣದಲ್ಲಿ ಮುಸ್ಲಿಂ ಯುವಕ ವ್ಹೀಲಿಂಗ್‌ನಲ್ಲಿ ತೊಡಗಿದ್ದ. ಈತನಿಗೆ ಹಿಂದೂ ಯುವಕ ಸುಶೀಲ್ ಎಂಬಾತ ಬುದ್ಧಿಮಾತು ಹೇಳಿದ್ದರಿಂದ ಕೆರಳಿ ಚೂರಿಯಿಂದ ಇರಿಯಲಾಗಿತ್ತು. ಇದರಿಂದಾಗಿ ಪಟ್ಟಣದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ಖಂಡಿಸಿ ಬುಧವಾರ ಬೆಳಗ್ಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಪಟ್ಟಣ ಠಾಣೆ ಮುಂಭಾಗ ತೀವ್ರ ಪ್ರತಿಭಟನೆ ನಡೆಸಿ, ಕೂಡಲೇ ಆರೋಪಿಗಳ ಬಂಧನದ ಜತೆಗೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿತ್ತು.