ಹಾವೇರಿ ಟಿಕೆಟ್ ಕಾಂತೇಶ್‌ಗೆ ನೀಡಿ, ಗೆಲ್ಲಿಸ್ತಾರೆ: ಈಶ್ವರಪ್ಪ ವಿಶ್ವಾಸಹಾವೇರಿಯಲ್ಲಿ ಪುತ್ರ ಕೆ.ಇ. ಕಾಂತೇಶ್‌ಗೆ ಟಿಕೆಟ್ ಸಿಗುವುದು ಖಚಿತ. ಸ್ವತಃ ಬಿ.ಎಸ್. ಯಡಿಯೂರಪ್ಪ ಅವರೇ ಕಾಂತೇಶ್‌ಗೆ ಟಿಕೆಟ್ ನೀಡುವುದು ಮಾತ್ರವಲ್ಲ, ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದ್ದಾರೆ. ಅವರು ಮಾತಿಗೆ ಎಂದೂ ತಪ್ಪುವರಲ್ಲ. ಹೀಗಾಗಿ, ಟಿಕೆಟ್ ವಿಚಾರದಲ್ಲಿ ಯಾವುದೇ ಆತಂಕ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.