• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸುಶೀಲ್‌ಗೆ ಚೂರಿ ಇರಿದ ಪ್ರಕರಣದಲ್ಲಿ ಎಲ್ಲರ ಆರೋಪಿಗಳ ಬಂಧಿಸಿ
ಕೆಲ ಮುಸ್ಲಿಮರಿಂದ ಹಿಂದೂಗಳ ವಿರುದ್ಧ ಹಲ್ಲೆ ಕೊಲೆ ಯತ್ನದ ಪ್ರಕರಣ ಹೆಚ್ಚಾಗುತ್ತಿದೆ. ಮಂಗಳವಾರ ರಾತ್ರಿ ಪಟ್ಟಣದ ದೊಡ್ಡಪೇಟೆಯಲ್ಲಿ 7.30ರ ಹೊತ್ತಿಗೆ ಮೂರ್ನಾಲ್ಕು ಮುಸ್ಲಿಂ ಯುವಕರು ಬೈಕ್‌ ವ್ಹೀಲಿಂಗ್‌ನಲ್ಲಿ ತೊಡಗಿದ್ದರು. ಇದರಿಂದ ಮಕ್ಕಳು, ಮಹಿಳೆಯರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಬೇಕಿದ್ದರೆ ಹೊರವಲಯದಲ್ಲಿ ವ್ಹೀಲಿಂಗ್ ಮಾಡುವಂತೆ ಸುಶೀಲ್ ಎಂಬಾತ ತಿಳಿಸಿದ್ದಾನೆ. ಇದೇ ಕಾರಣಕ್ಕೆ ರಾತ್ರಿ 9 ಗಂಟೆವರೆಗೆ ಹಿಂಬಾಲಿಸಿ, ಸುಶೀಲ್‌ ವಾಯುವಿಹಾರಕ್ಕೆ ತೆರಳಿದ್ದಾಗ ಆತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಇದು ಆತಂಕಕಾರಿ ಘಟನೆಯಾಗಿದ್ದು, ಖಂಡನೀಯ. ಈ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಶಿಕಾರಿಪುರ ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಮಹಿಳೆಯರ ಸ್ವಾವಲಂಬನೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಕಾರಿಯಾಗಿದೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಸಂಘಟನೆ ಜತೆಗೆ ಆತ್ಮವಿಶ್ವಾಸ ಬೆಳೆಯುತ್ತಿದೆ. ಜ್ಞಾನವಿಕಾಸ ಕೇಂದ್ರದ ಮೂಲಕ ಸದಸ್ಯರಿಗೆ ಪ್ರತಿ ತಿಂಗಳು ಆರೋಗ್ಯ, ಶಿಕ್ಷಣ, ಕಾನೂನು ಅರಿವು, ಮಕ್ಕಳ ಪಾಲನೆ ಪೋಷಣೆ, ಸಂಸ್ಕೃತಿ ಮತ್ತು ಸಂಸ್ಕಾರ, ಕುಟುಂಬ ನಿರ್ವಹಣೆ, ಸ್ವಉದ್ಯೋಗ ಮೊದಲಾದ ವಿಚಾರಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಲಾಗುತ್ತಿದೆ. ಈ ಮೂಲಕ ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಧರ್ಮಸ್ಥಳ ಸಂಘ ಸಹಕಾರಿಯಾಗಿದೆ ಎಂದು ಸೊರಬ ತಾಲೂಕು ಭೈರೇಕೊಪ್ಪದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ ಹೇಳಿದ್ದಾರೆ.
ತಿಮ್ಮಪ್ಪ ಹೆಗಡೆ ಬದುಕು, ಅವಿಭಕ್ತ ಕುಟುಂಬ ಎಲ್ಲರಿಗೂ ಮಾದರಿ
ಸಹಕಾರಿ ಧುರೀಣ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಬದುಕು ಹಾಗೂ ಅವರ ಅವಿಭಕ್ತ ಕುಟುಂಬ ಎಲ್ಲರಿಗೂ ಮಾದರಿಯಾಗಿದೆ. ರಾಜಕೀಯ ವ್ಯವಸ್ಥೆಗೆ ಗೌರವ ತಂದುಕೊಟ್ಟ ಅಪರೂಪದ ರಾಜಕಾರಣಿಗಳಲ್ಲಿ ಎಲ್.ಟಿ. ತಿಮ್ಮಪ್ಪ ಅವರು ಎದ್ದು ಕಾಣುತ್ತಾರೆ. ತಿಮ್ಮಪ್ಪ ಹೆಗಡೆ ಅವರ ಕುಟುಂಬವನ್ನು ಗಮನಿಸಿದಾಗ ನಂಬಿಕೆ, ಪ್ರಾಮಾಣಿಕತೆ, ಭಾವನಾತ್ಮಕ ಸಂಬಂಧಗಳನ್ನು ಕಾಣಬಹುದು. ಇಂತಹ ಮಾನವೀಯ ಮತ್ತು ಭಾವನಾತ್ಮಕ ಸಂಬಂಧಗಳು ಇಂದಿನ ಒಟ್ಟು ವ್ಯವಸ್ಥೆಗೆ ಅತ್ಯಂತ ಅಗತ್ಯ ಎಂದು ವಿಧಾನಸಭೆಯ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಾಗರದ ಕಾನುಕೊಪ್ಪ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಜೀವನದಲ್ಲಿ ಶ್ರದ್ಧೆ, ವಿಶ್ವಾಸದಿಂದ ಬಾಳೋದು ಮುಖ್ಯ: ಉಜ್ಜಯಿನಿ ಶ್ರೀ
ಪ್ರತಿಯೊಂದರ ಸತ್ಯಾಸತ್ಯತೆ ನಾವು ನೋಡುವ ದೃಷ್ಟಿಯಲ್ಲಿ ಅಡಗಿದೆ. ಜೀವನದಲ್ಲಿ ಶ್ರದ್ಧೆ- ನಂಬಿಕೆ- ವಿಶ್ವಾಸಗಳನ್ನು ಬೆಳೆಸಿಕೊಂಡು ನಡೆಯುವುದು ಅವಶ್ಯಕವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಭೀಷಣನ ಕೋರಿಕೆ ಮೇರೆಗೆ ಶ್ರೀಲಂಕಾದಲ್ಲಿ ಮುಕ್ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ್ದು ಇತಿಹಾಸ. ಆದರೂ ಅದು ಇಂದಿಗೂ ಸತ್ಯವಾಗಿದೆ. ಶ್ರೀಲಂಕಾದ ಜಾಫ್ನಾದಿಂದ ಉತ್ತರಕ್ಕೆ 140 ಕಿ.ಮೀ. ಅಂತರದಲ್ಲಿರುವ ಲಿಂಗಮಲೈ ಹತ್ತಿರ ರೇಣುಕವನ- ರೇಣುಕ ಗ್ರಾಮವಿದ್ದು, ಅಲ್ಲಿಗೆ ಭೇಟಿ ನೀಡಿದರೆ ಆ ಸಂಪೂರ್ಣ ಪ್ರದೇಶ ಲಿಂಗಮಯ ಆಗಿರುವುದನ್ನು ಕಾಣಬಹುದು ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಶಿಕಾರಿಪುರದಲ್ಲಿ ಹೇಳಿದ್ದಾರೆ.
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸ: ಆಯನೂರು
ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲು ಬಯಸಿದ್ದು, ಪಕ್ಷದ ವರಿಷ್ಠರಿಗೆ ಟಿಕೆಟ್ ಬೇಡಿಕೆ ಇರಿಸಿದ್ದೇನೆ. ಕಾಂಗ್ರೆಸ್ ನನಗೆ ಅವಕಾಶ ಕೊಡುತ್ತದೆ ಎನ್ನುವ ವಿಶ್ವಾಸವಿದ್ದು, ಎಲ್ಲೆಡೆ ಪ್ರವಾಸ ಮಾಡುವ ಮೂಲಕ ಮತಯಾಚನೆ ನಡೆಸುತ್ತಿದ್ದೇನೆ. ನೈರುತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಮತ ನೀಡಿದ ಮತದಾರರಿಗೆ ವಂಚನೆಯಾಗದಂತೆ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವ ಮತ್ತು ಬೇಡಿಕೆಗಳನ್ನು ಈಡೇರಿಸಲು ಅವರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಕೆಪಿಸಿಸಿ ವಕ್ತಾರ, ಟಿಕೆಟ್‌ ಆಕಾಂಕ್ಷಿ ಆಯನೂರು ಮಂಜುನಾಥ್ ಸಾಗರದಲ್ಲಿ ಹೇಳಿದ್ದಾರೆ.
ಚಿಕ್ಕಮಾಕೊಪ್ಪ ಹಬ್ಬದಲ್ಲಿ ಓಡಿ ಮನರಂಜಿಸಿದ ಹೋರಿಗಳು
ಗ್ರಾಮೀಣ ಭಾಗದ ರೈತರ ಅಚ್ಚುಮೆಚ್ಚಿನ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ಸೋಮವಾರ ಸೊರಬ ತಾಲೂಕಿನ ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗೆಳೆಯರ ಬಳಗ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸುಮಾರು 150ಕ್ಕೂ ಅಧಿಕ ಹೋರಿಗಳು ಆಗಮಿಸಿದ್ದವು. ಅಖಾಡದಲ್ಲಿ ಹೋರಿಗಳ ಮಿಂಚಿನ ಓಟ ನೋಡುಗರ ಗಮನ ಸೆಳೆಯಿತು. ಹೋರಿಹಬ್ಬ ನೋಡಲು ನೆರೆಯ ಗ್ರಾಮಗಳು ಸೇರಿದಂತೆ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು.
ಸರ್ಕಾರಿ ನೌಕರರು ಪಾರದರ್ಶಕತೆಯಿಂದ ಜವಾಬ್ದಾರಿ ನಿಭಾಯಿಸಬೇಕು: ಜಿಲ್ಲಾಧಿಕಾರಿ
ಮುಂಬರುವ ಲೋಕಸಭಾ ಚುನಾವಣೆಯನ್ನು ಎಲ್ಲರೂ ಒಂದು ತಂಡವಾಗಿ ನಿಷ್ಪಕ್ಷಪಾತ, ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಚುನಾವಣೆಗಳನ್ನು ನಡೆಸುವ ಅವಕಾಶ ಎಲ್ಲರಿಗೂ ಲಭಿಸುವುದಿಲ್ಲ. ಸರ್ಕಾರಿ ಅಧಿಕಾರಿ, ನೌಕರಿಗೆ ಈ ಸದವಕಾಶ ಲಭಿಸಿದ್ದು, ಇದನ್ನು ನಿಷ್ಪಕ್ಷವಾಗಿ ಮತ್ತು ಪಾರದರ್ಶಕವಾಗಿ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಕಾಡು ಪ್ರಾಣಿಗಳ ಉಪಟಳ ತಪ್ಪಿಸದ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಸಾಗರ ತಾಲೂಕಿನ ಚಿಪ್ಳಿ ಲಿಂಗದಹಳ್ಳಿಯಲ್ಲಿ ಕಾಡು ಪ್ರಾಣಿಗಳು ಕಾಣಿಸಿರುವ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳದೇ, ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮದಲ್ಲಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ. ಇಲಾಖೆಗೆ ಮಾಹಿತಿ ಮುಟ್ಟಿಸಿದಾಗ ಬೆಳಗ್ಗೆ ಬರುವುದಾಗಿ ಹೇಳಿ, ಸೋಮವಾರ ಮಧ್ಯಾಹ್ನ 2 ಗಂಟೆ ಸ್ಥಳಕ್ಕೆ ಬಂದಿದ್ದಾರೆ. ಸಿಬ್ಬಂದಿ ವಾಚ್‌ಗಾರ್ಡ್ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಚಿರತೆ ನೋಡಿದ ಪ್ರತ್ಯಕ್ಷದರ್ಶಿಗಳು, ಚಿರತೆ ಫೋಟೋ, ವೀಡಿಯೊ ತಂದುಕೊಟ್ಟರೆ ಮಾತ್ರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ನೀವು ಚಿರತೆಯದೆಂದು ತೋರಿಸುವ ಕಾಲಿನ ಗುರುತುಗಳನ್ನೆಲ್ಲ ಗಮನಿಸಿಕೊಂಡು ಕೂರಲು ಆಗುವುದಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ರೈತರಿಗೆ ನೀಡುತ್ತಿದ್ದ ಹಾಲಿನ ದರ ಕಸಿದ ಸರ್ಕಾರಕ್ಕೆ ಗೋಶಾಪ ತಟ್ಟುತ್ತದೆ
ರಾಜ್ಯ ಸರ್ಕಾರ ರೈತರಿಂದ ಖರೀದಿ ಮಾಡುತ್ತಿದ್ದ ಹಾಲಿನ ದರವನ್ನು ಕಡಿತ ವಿರೋಧಿಸಿ, ಮಂಗಳವಾರ ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗೋವುಗಳ ಸಮೇತ ಪ್ರತಿಭಟನೆ ನಡೆಯಿತು. ಈ ಹಿಂದೆ ರೈತರಿಗೆ ₹42 ನೀಡುತ್ತಿದ್ದರು. ಈಗ ₹33ಕ್ಕೆ ಇಳಿಸಲಾಗಿದೆ. ಭತ್ತ, ಮೆಕ್ಕೆಜೋಳ, ಕಬ್ಬು ಇತ್ಯಾದಿ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರು. ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ ಸರ್ಕಾರ ಈಗ 4 ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ. ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದ ಪ್ರತಿಭಟನೆಯಲ್ಲಿ ಎಚ್ಚರಿಕೆ ನೀಡಿದರು.
ಹಬ್ಬ, ಜಾತ್ರೆಗಳ ಉದ್ದೇಶ ನಮ್ಮಗಳ ಮನಪರಿವರ್ತನೆ: ಯುಗಧರ್ಮ ರಾಮಣ್ಣ
ಶಿಖರದಂತಿರುವ ತಲೆಗೆ ಎಣ್ಣೆ ಹಾಕಿದರೆ ನಿಖರವಾದ ಬುದ್ಧಿ. ಶಿಖರದ ಕೆಳಗಿನ ಹೊಟ್ಟೆಗೆ ಎಣ್ಣೆ ಹಾಕಿದರೆ ಯಕರಮಕರ ಬುದ್ಧಿ ಬರುತ್ತದೆ. ನಮ್ಮನು ನಾವು ಪರಿವರ್ತನೆ ಮಾಡಿಕೊಳ್ಳುವ ಉದ್ದೇಶದಿಂದ ಹಿರಿಕರು ಹಬ್ಬ, ಜಾತ್ರಾ ಮಹೋತ್ಸವಗಳ ಆಚರಣೆಗಳನ್ನು ಮುನ್ನಲೆಗೆ ತಂದರು. ದೇಹವೆಂಬ ಬಾಡಿಗೆ ಮನೆಯೊಳಗೆ ದೇವರು ನೆಲೆಯಾಗಬೇಕು. ಹಳ್ಳಿಗಳಲ್ಲಿ ಗ್ರಾಮೀಣ ಸೊಗಡಿನ ಸಂಸ್ಕಾರ, ಸಂಸ್ಕೃತಿಗಳು ಮಾಯವಾಗುತ್ತಿವೆ. ಮಾನವ ನೀತಿ ನಿಯಮಗಳನ್ನು ಮರೆತು ಜೀವನ ನಡೆಸಬಾರದು ಎಂದು ಜಾನಪದ ಸಾಹಿತಿ ಯುಗಧರ್ಮ ರಾಮಣ್ಣ ಮೈದೊಳಲು ಜಾತ್ರೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
  • < previous
  • 1
  • ...
  • 387
  • 388
  • 389
  • 390
  • 391
  • 392
  • 393
  • 394
  • 395
  • ...
  • 490
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved