ಈಡಿಗರು ಸಮಾಜ ಸೇವೆಗೆ ಹೆಸರುವಾಸಿ ಈಡಿಗ ಸಮಾಜಕ್ಕೆ ಪ್ರಾಚೀನ ಇತಿಹಾಸವಿದ್ದು, ಸಮಾಜಸೇವೆಗೆ ಹೆಸರುವಾಸಿಯಾಗಿದೆ. ಇತಿಹಾಸದ ಉದ್ದಕ್ಕೂ ಈಡಿಗರ ಸಾಧನೆಯ ಉಲ್ಲೇಖವಿದೆ. ಈ ಸಮುದಾಯದವರು ಜಿಲ್ಲೆಯಲ್ಲಿ ಬಗರ್‌ಹುಕುಂ ಹೋರಾಟ, ನೀರಾವರಿ ಹೋರಾಟ, ಜೀತ ಪದ್ಧತಿ ವಿಮುಕ್ತಿ ಹೋರಾಟ ನಡೆಸಿದ ದಾಖಲೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಗರದಲ್ಲಿ ಹೇಳಿದ್ದಾರೆ.