ಮನಸೂರೆಗೊಂಡ ''''''''ಚೆಕಾವ್ ಟು ಶಾಂಪೇನ್'''''''' ನಾಟಕ ಪ್ರದರ್ಶನರಂಗದ ಮೇಲೆ ಪ್ರದರ್ಶನಗೊಳ್ಳುತ್ತಿದ್ದ ಆಂಟನ್ ಚೆಕಾವ್ ಸಣ್ಣ ನಾಟಕಗಳು ಜನರ ಮನಸೂರೆಗೊಂಡಿತ್ತು. ಎನ್ಇಎಸ್ ವಿದ್ಯಾರ್ಥಿಗಳು ನೌಕರರಿಂದಲೇ ರೂಪಿತಗೊಂಡಿದ್ದ ಕಲಾ ತಂಡದ ಮನೋಜ್ಞ ಅಭಿನಯದ ಜೊತೆಗೆ, ಕಥೆಯ ಸಾರಾಂಶವು ಪ್ರಜ್ಞೆಯ ಪ್ರವಾಹವಾಗಿ ಹೊರಹೊಮ್ಮಿತು. ಸಾಂದರ್ಭಿಕವಾಗಿ ರೂಪಿಸಿದ್ದ ಹಿನ್ನಲೆ ಗೀತೆಗಳು, ನಾಟಕಕ್ಕೆ ಮತ್ತಷ್ಟು ಭಾವನೆಯ ಸ್ಪರ್ಶ ನೀಡಿತ್ತು.