ಕಂತನಹಳ್ಳಿ ಕಾಡು ನಾಶಕ್ಕೆ ಅರಣ್ಯಾಧಿಕಾರಿಗಳೇ ಹೊಣೆಸೊರಬ: ರಾಜ್ಯದಲ್ಲೇ ಅತಿ ಹೆಚ್ಚು ಅರಣ್ಯ ನಾಶವಾದ ಜಿಲ್ಲೆ ಶಿವಮೊಗ್ಗ ಎಂದು ತಜ್ಞ ವರದಿ ಹೇಳಿದ್ದಾಗ್ಯೂ ಜಿಲ್ಲೆಯ ಅರಣ್ಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸದ ಪರಿಣಾಮ ಈಚೆಗೆ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅತಿ ಹೆಚ್ಚು ಅರಣ್ಯ ನಾಶ, ಅಕ್ರಮ ಮರಳು ದಂಧೆ, ವನ್ಯ ಮೃಗಗಳ ಬೇಟೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಖೇದ ವ್ಯಕ್ತಪಡಿಸಿದರು.