ಪ್ರಸ್ತುತ ಸಮಾಜಕ್ಕೆ ಆದರ್ಶಪ್ರಾಯತಿಪಟೂರು : ಕನಕದಾಸರು ಒಂದು ಜಾತಿ ವರ್ಗಕ್ಕೆ ಸೀಮಿತರಾದವರಲ್ಲ ಸರ್ವ ಜನಾಂಗದವರ ಕಣ್ತೆರೆಸಿದ ಸಾಧಕರಾಗಿದ್ದರು. ಅವರ ಅನೇಕ ಕೀರ್ತನೆಗಳಲ್ಲಿ ಸಾಮಾಜಿಕ, ಆಧ್ಯಾತ್ಮಿಕ ಮೌಲ್ಯಗಳು ಪ್ರತಿಬಿಂಬಿತವಾಗಿದ್ದು ಅವರ ನಡೆ, ನುಡಿ, ಆಚಾರ, ವಿಚಾರಗಳು ಮತ್ತು ಅವರು ನೀಡಿದ ಸಂದೇಶಗಳು ಪ್ರಸ್ತುತ ಸಮಾಜಕ್ಕೆ ಆದರ್ಶಪ್ರಾಯ ಎಂದು ತಾಲೂಕಿನ ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಆರ್. ದೇವರಾಜು ತಿಳಿಸಿದರು.