ನಗರದಾದ್ಯಂತ ಪ್ಲಾಸ್ಟಿಕ್ ಕಸದ ರಾಶಿಯಿಂದ ಪರಿಸರ ಮಾಲೀನ್ಯಸ್ವಚ್ಚ ಭಾರತ ಎಂಬ ಘೋಷಣೆಗೆ ಅಪವಾದವೆಂಬಂತೆ ನಗರದಲ್ಲಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ವಸ್ತುಗಳದ್ದೇ ಕಾರುಬಾರು. ರಸ್ತೆ, ಚರಂಡಿ, ಖಾಲಿ ಸೈಟುಗಳಲ್ಲಿ ಪ್ಲಾಸ್ಟಿಕ್ ಸಹಿತ ಕಸದ ರಾಸಿಗಳಿದ್ದು, ನಗರಸಭೆಯು ಪರಿಸರ, ಆರೋಗ್ಯ ಮತ್ತು ಸೌಂದರ್ಯಕ್ಕೆ ಧಕ್ಕೆಯುಂಟಾಗದಂತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.