ನಿರಂತರ ವಿದ್ಯುತ್ಗಾಗಿ ರೈತರಿಂದ ಪ್ರತಿಭಟನೆಬೆಸ್ಕಾಂನವರು ಗ್ರಾಮೀಣ ಭಾಗದಲ್ಲಿ ತೋಟಗಳ ಮನೆಗಳಲ್ಲಿ ವಾಸಿಸುತ್ತಿರುವ ರೈತರಿಗೆ ಸಂಜೆ ನಂತರ ಇಡೀ ರಾತ್ರಿ ವಿದ್ಯುತ್ ನೀಡುತ್ತಿಲ್ಲ. ಸಂಜೆ ಕರೆಂಟ್ ಹೋದರೆ ಬೆಳಗ್ಗೆಯಾದರೂ ಬರುವುದಿಲ್ಲ ಇದರಿಂದ ರಾತ್ರಿ ವೇಳೆ ಕಾರ್ಗತ್ತಲಿನಲ್ಲಿ ಕಾಲ ಕಳೆಯುವಂತಾಗಿದ್ದು ಕೂಡಲೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಮಾದೀಹಳ್ಳಿ, ಮಡೇನೂರು, ಬಳ್ಳೆಕೆರೆ, ರಂಗಾಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರು ನಗರದ ಬೆಸ್ಕಾಂ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಎಇಇ ಮನೋಹರ್ರವರಿಗೆ ಮನವಿ ಸಲ್ಲಿಸಿದರು