ಭದ್ರಗಿರಿ ಶ್ರೀ ವೀರವಿಠ್ಠಲ ದೇವಳದಲ್ಲಿ ದುರ್ಗಾ ನಮಸ್ಕಾರ ಸಂಪನ್ನದಕ್ಷಿಣ ಪಂಡರಾಪುರ ಖ್ಯಾತಿಯ ಇಲ್ಲಿನ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ನವರಾತ್ರಿಯಂದು ವರ್ಷಂಪ್ರತಿ ಜರುಗುವ ಶ್ರೀ ದುರ್ಗಾ ನಮಸ್ಕಾರ ಕಾರ್ಯಕ್ರಮ ಶನಿವಾರ ಸಾಯಂಕಾಲ ವೇದಮೂರ್ತಿಗಳಾದ ಕಲ್ಯಾಣಪುರ ರಾಮಚಂದ್ರ ಅವಧಾನಿ, ಕಾರ್ಕಳ ಜಯದೇವ ಪುರಾಣಿಕ್, ಕೃಷ್ಣಾನಂದ ಶರ್ಮ ಇವರ ನೇತೃತ್ವದಲ್ಲಿ ವೈಭವದಿಂದ ನಡೆಯಿತು.